Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಕಣ್ಣಪ್ಪ` ಚಿತ್ರಕ್ಕೆ ನ್ಯೂಜಿಲ್ಯಾಂಡ್‍ನಲ್ಲಿ ಚಿತ್ರೀಕರಣ ಪ್ರಾರಂಭ
Posted date: 30 Sat, Sep 2023 08:31:14 AM
ವಿಷ್ಣು ಮಂಚು ಅಭಿನಯದ `ಕಣ್ಣಪ್ಪ` ಚಿತ್ರಕ್ಕೆ ನ್ಯೂಜಿಲ್ಯಾಂಡ್‍ನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ. ಈ ಚಿತ್ರವು ವಿಷ್ಣು ಮಂಚು ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಇಂಥದ್ದೊಂದು ಪೌರಾಣಿಕ ಚಿತ್ರದ ಭಾಗವಾಗಬೇಕು ಎಂಬುದು ಅವರ ಏಳು ವರ್ಷಗಳ ಕನಸಾಗಿತ್ತು. ಅದು ಶಿವ-ಪಾರ್ವತಿಯರ ಆಶೀರ್ವಾದದಿಂದ ಕೊನೆಗೂ ನನಸಾಗಿದೆ ಎಂದು ವಿಷ್ಣು ಹೇಳಿಕೊಂಡಿದ್ದಾರೆ.
 
ಇಂಥದ್ದೊಂದು ಬೃಹತ್‍ ಭಕ್ತಿಪ್ರಧಾನ ಚಿತ್ರದ ಕನಸನ್ನು ವಿಷ್ಣು ಅವರಲ್ಲಿ ಮೊದಲಿಗೆ ಬಿತ್ತಿದ್ದು ಖ್ಯಾತ ನಟ ಮತ್ತು ನಿರ್ದೇಶಕ ತನಿಕೆಲ್ಲ ಭರಣಿ. ಏಳು ವರ್ಷಗಳ ಹಿಂದೆ, ಭರಣಿ ಅವರು ವಿಷ್ಣುಗೆ `ಕಣ್ಣಪ್ಪ` ಚಿತ್ರದ ಕಥೆ ಹೇಳಿದರಂತೆ. ಅಲ್ಲಿಂದ ಪ್ರಾರಂಭವಾದ ಪ್ರಯಾಣ, ಈಗ ಸಿನಿಮಾ ಪ್ರಾರಂಭವಾಗುವವರೆಗೂ ಬಂದು ನಿಂತಿದೆ. ಈ ಪ್ರಯಾಣದಲ್ಲಿ ಕಥೆಗೆ ಸೂಕ್ತ ಸಲಹೆ, ಸೂಚನೆ ಕೊಟ್ಟು ಪ್ರೋತ್ಸಾಹಿಸಿದ ಪರಚೂರಿ ಗೋಪಾಲಕೃಷ್ಣ, ವಿಜಯೇಂದ್ರ ಪ್ರಸಾದ್‍, ತೋಟಪಲ್ಲಿ ಸಾಯಿನಾಥ್‍, ತೋಟ ಪ್ರಸಾದ್‍ ಮತ್ತು ನಿರ್ದೇಶಕರಾದ ನಾಗೇಶ್ವರ ರೆಡ್ಡಿ ಹಾಗೂ ಈಶ್ವರ ರೆಡ್ಡಿ ಮುಂತಾದವರನ್ನು ವಿಷ್ಣು ಮರೆಯುವುದಿಲ್ಲ. ಅವರೆಲ್ಲರ ಸಲಹೆ-ಸೂಚನೆಗಳಿಲ್ಲದಿದ್ದರೆ ಚಿತ್ರದ ಕಥೆ ಇಷ್ಟೊಂದು ಅದ್ಭುತವಾಗಿ ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ ಎಂದು ನಂಬಿದ್ದಾರೆ.
 
ಕಳೆದ ಎಂಟು ತಿಂಗಳುಗಳು ಮೆರೆಯಲಾರದ ಅನುಭವ ಎನ್ನುವ ವಿಷ್ಣು, `ಕಣ್ಣಪ್ಪ`ಚಿತ್ರತಂಡದವರಿಗೆ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಒಂದು ಮರೆಯಲಾರದ ಅನುಭವ. ನಮ್ಮ ತಂಡದವರು ರಜೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಬ್ಬಗಳನ್ನು ಮರೆತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ದಿನಕ್ಕೆ ಐದು ಗಂಟೆಯಷ್ಟೇ ನಿದ್ದೇ ಮಾಡಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ, ನಮ್ಮ ನಿರ್ಧಾರ ಮತ್ತು ನಂಬಿಕೆ ಅಚಲವಾಗಿತ್ತು. ಎಲ್ಲರ ಶ್ರಮದಿಂದಾಗಿ `ಕಣ್ಣಪ್ಪ`ಚಿತ್ರವು ಚಿತ್ರೀಕರಣ ಹಂತದವರೆಗೂ ಬಂದಿದೆ. 600ಕ್ಕೂ ಹೆಚ್ಚು ಜನರ ತಂಡ ನ್ಯೂಜಿಲ್ಯಾಂಡ್‍ನಲ್ಲಿ ಬೀಡುಬಿಟ್ಟು, ನಮ್ಮ ಕನಸನ್ನು ನನಸಾಗಿಸುವುದಕ್ಕೆ ದುಡಿಯುತ್ತಿದೆ. ನಮ್ಮ ತಂದೆ ಮೋಹನ್‍ ಬಾಬು ಅವರ ಸಹಕಾರ, ಪ್ರೋತ್ಸಾಹವು ನಮ್ಮ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿದೆ’ ಎನ್ನುತ್ತಾರೆ.
 
`ಕಣ್ಣಪ್ಪ` ಚಿತ್ರದಲ್ಲಿ ಈ ದೇಶದ ಪ್ರತಿಭಾವಂತ ನಟರ ದಂಡೇ ಇದೆಯಂತೆ. ಚಿತ್ರದಲ್ಲಿ ಯಾರು ಯಾರು ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಿಳಿಸಲಾಗುತ್ತದಂತೆ. ಅದರ ಮಧ್ಯೆಯೂ ಸೋಷಿಯಲ್‍ ಮೀಡಿಯಾದಲ್ಲಿ ಚಿತ್ರದ ಕುರಿತು ಸುಳ್ಳುಸುದ್ದಿಗಳು ಹರಡುತ್ತಿರುವುದರಿಂದ, ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ, X (Twitter)ನ ತಮ್ಮ ಚಿತ್ರದ ಅಧಿಕೃತ ಖಾತೆಯನ್ನು ಮಾತ್ರ ನಂಬಬೇಕೆಂದು ವಿಷ್ಣು ಮನವಿ ಮಾಡಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕಣ್ಣಪ್ಪ` ಚಿತ್ರಕ್ಕೆ ನ್ಯೂಜಿಲ್ಯಾಂಡ್‍ನಲ್ಲಿ ಚಿತ್ರೀಕರಣ ಪ್ರಾರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.